Why Divi
ಕಾರ್ಯಕಾರಿ-ಸಮಿತಿ
ಬಿ. ಎಂ. ಶ್ರೀಕಂಠಯ್ಯ
‘ಕನ್ನಡ ಕಣ್ಣ’ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಹೊಸಗನ್ನಡದ ಯುಗಪುರುಷರು; ಇಂದು ಹೊಸಗನ್ನಡದ ಸಾಹಿತ್ಯ ಎಂದು ಯಾವುದನ್ನು ಕರೆಯುತ್ತೇವೆಯೋ ಅದೆಲ್ಲಕ್ಕೂ ಪ್ರೇರಕ ಶಕ್ತಿ. ಇಂದಿನ ಎಲ್ಲ ಹೆಸರಾಂತ ಸಾಹಿತಿಗಳೂ ಇವರ ಶಿಷ್ಠ-ಪ್ರಶಿಷ್ಠರೇ, ಇಂತಹ ಆಚಾರ್ಯ ಪುರುಷರ ಹೆಸರಿನ ಈ ಸಂಸ್ಥೆ ಸೃಜನ ಮತ್ತು ಸಂಶೋಧನ ಎರಡೂ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದೆ. ಒಂದು ಪ್ರಾಚೀನ ಸಾಹಿತ್ಯದ ಪರಿಷ್ಠರಣ. ಇನ್ನೊಂದು ಆಧುನಿಕ ಸಾಹಿತ್ಯದ ಪುರಸ್ಕರಣ.
“ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ
ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು.” ಇದು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು 1911ರಲ್ಲೇ ನುಡಿದ ವಾಣಿ.
